Monday, August 31, 2015

ಕನ್ನಡ

ಕಲಿ-ಕಲಿಸು ಕನ್ನಡ
ಕೇಳಿ-ಕೇಳಿಸು ಕನ್ನಡದ ಇಂಪು
ಹರಡು-ಹರಡಿಸು ಕನ್ನಡದ ಕಂಪು
ಧುಮುಕಿ-ಧುಮುಕಿಸು ಕನ್ನಡ ಪದಗಳ ಸಾಗರದಲಿ
ಅರಿತು-ಅರಿತವ ಸದಾ ಇರುವನು ಇದರ ಸಾಂಗತ್ಯದಲ್ಲಿ

Friday, August 21, 2015

ನನ್ನಂತೆ...

'ನಾನೊಬ್ಬ ಸೋತಿಹೆನು' ಎನ್ನುವಲ್ಲಿ
ನನ್ನೊಬ್ಬ, ಇನ್ನೊಬ್ಬ ಸೋತಿಹನು..
'ನಾನೇನು ಮಹಾ ಇಲ್ಲಿ' ಎನ್ನುವಲ್ಲಿ
ನನ್ನೊಬ್ಬ, ಇನ್ನೊಬ್ಬ ಹುಟ್ಟಿಹನು..

Monday, July 27, 2015

ಜನನಾಯಕ | People's President

ಓ ದಿಟ್ಟ ನಾಯಕ! ನೀನು ನಮಗೆ ಪ್ರೇರಕ
ನಿನ್ನ ಈ ಕಾಯಕ ಮೆಚ್ಚಿಹನು ನಿಜ ನಾಗರಿಕ
ಅಗಲಿ ನಿನ್ನ ಮೂಡಿದೆ ಮರುಕ
ಯುವ ಪೀಳಿಗೆಗೆ ನಿನ್ನೊಬ್ಬ ನಿಜ ಸೂಚಕ
#ಎಪಿಜೆಅಬ್ದುಲ್ಕಲಾಮ್   #ಶ್ರದ್ಧಾಂಜಲಿ

Thursday, July 16, 2015

ನಿನಗೆ ನೀನೇ ಆಸರೆ..

ನಿನ್ನ ಹೊರೆಯ ನೀ ಹೊರುವದು ನಿನ್ನ ಧರ್ಮ
ಯಾರು ಹೊರದಿದ್ದಲ್ಲಿ ಅದು ನಿನ್ನ ಕರ್ಮ
ಚಿಂತೆಗೀಡಾಗದೆ ಸ್ಮರಿಸು ದೇವಾನಾಮ
ದೇವನೂ ಒಲಿಯದಿದ್ದಲ್ಲಿ ನಿನ್ನದು ಮಾರಣಹೋಮ

Tuesday, June 23, 2015

ವೇಷ ಒಂದೇ ನಾಮ ಹಲವು

ಪೂಜಿಸಲು ಆಯಿತು ಅರಳಿ ಕಟ್ಟೆ
ವಾಗ್ವಾದಗಳಿಗೆ ಆಯಿತು ಪಂಚಾಯತಿ ಕಟ್ಟೆ
ಸಾಯಂಕಾಲಕ್ಕೆ ಆಯಿತು ಹರಟೆ ಕಟ್ಟೆ
ನಾಮ ಬದಲಾಯಿತು ಬದಲಿಸದಿದ್ದರೂ ತನ್ನ ಬಟ್ಟೆ

Monday, June 1, 2015

ಯಾವುದು ನನ್ನದು?

ಗಳಿಸಿದ ಹೆಗ್ಗಳಿಕೆ  
ಹಿಡಿದ ಬಿಕ್ಕಳಿಕೆ  
ಯಾವುದೂ ಶಾಶ್ವತವಲ್ಲ.. 
 
ನಿದ್ರೆ ನಿನ್ನದಲ್ಲ  
ನೀನು ನಿದ್ರೆಯದು  
ನಿದ್ರೆ ಕನಸಿನದು  
ಕನಸು ಕಣ್ಣಿನದು  
ಕಣ್ಣು ಕಂಡಿದ್ದು  
ಕಂಡಿದ್ದು ಪರರದು  
ಪರರು ನಿನ್ನದಲ್ಲ  
ಅದಕ್ಕೆ ಖಾಲಿ ಕೈಲಿ ಬರೋದು  
ಖಾಲಿ ಕೈಲಿ ಹೋಗೋದು.. 
 
ಅಲ್ಲಿಯವರೆಗೂ ನಿನ್ನ ದೇಹ, ಯೋಚನೆ ಹೊರತು  
ಎಲ್ಲ ಪರರದು..  

ಒಮ್ಮೊಮ್ಮೆ ಸ್ವಂತ ಮರ್ಯಾದೆಯೂ ನಿನ್ನ ಕೈಲಿರೋಲ್ಲ.

Thursday, March 26, 2015

ಅವಳ ನೆನಪು | Remembering her

ದಿನಗಳು ಉರಳಿದವು ನಿನ್ನ ನೋಡಿ
ಬರುವೆ ನೆನಪಲಿ-ಕನಸಲಿ ಓಡಿ ಓಡಿ
ನನ್ನ ಮೇಲೆ ನೀ ಮಾಡಿರುವೆ ಅದೆಂಥ ಮೋಡಿ
ನಿನ್ನ ನೆನೆಯುವದು ನನಗಾಗಿದೆ ರೂಢಿ
ನೀ ಕಾಣದಿರಲು ಮನ ಕೊರಗಿದೆ ಹೂವಿನಂತೆ ಬಾಡಿ..

Monday, March 2, 2015

ಚುಟುಕು-೧ | Chutuku-1

ಎಲ್ಲರಿಗೂ ಎಲ್ಲರೂ ಬೆಸರ
ಅದಕ್ಕೆ ಮೂಡನು ದಿನವೆಲ್ಲ ಚಂದಿರ
ತಿಳಿ ತಿಳಿದು ದೂಡಿದೆ ಪ್ರಾಯ
 ತಣ್ಣಗಾಗುವೇನೆ ಆ ಸೂರ್ಯ?

Monday, February 2, 2015

ಚುಟುಕು | Chutuku

ಮನದ ದುಗುಡ ಮನವೇ ಅರಿಯದು
ಕ್ಷಣದ ತವಕ ಕ್ಷಣಕೂ ಕಾಯದು
ಕೀಟಲೆ ಮನಸಿದು ಕಾಟ ಕೊಡುತಲೇ ಇರುವುದು…

Wednesday, January 7, 2015

ಬೆಂಕಿ-ಗಾಳಿ | Fire vs Air

ಗಾಳಿಯಿಂದಲೇ ಉರಿಯುವ ದೀಪವೇ! ಅರದಿರು ಗಾಳಿಗೆ ಹೆದರಿ
ಓಡದಿರು ಗಾಳಿಯೇ! ದೀಪದ ತಾಪಕ್ಕೆ ಬೆದರಿ
ಯೋಚನೆ ೧: ಆಗಲಿ ಕದನ. ಗಾಳಿಯದಾದರೂ, ಬೆಳಕಿನದಾದರೂ ಮರಣ
                    ಎಲ್ಲಿಯವರೆಗೆ ಮಾಡುವಿರಿ ನೀವಿ ಕದನದ ಜೀವನ?
ಯೋಚನೆ ೨: ಬೆಂಕಿ! ತಂಪಾದ ಗಾಳಿಗೆ ನೀ ಉರಿಸಬೇಡ
                    ಗಾಳಿಯೇ! ಉರಿಯುವ ಬೆಂಕಿಗೆ ನೀ ನಂದಿಸಬೇಡ.