Wednesday, March 19, 2014

ಕರ್ತವ್ಯದ ಕಹಳೆ

ಮೂಡಿದೆ ಕಹಳೆ ಭ್ರಷ್ಟ ರಾಜಕಾರಣದ ವಿರುದ್ಧ
ಬನ್ನಿ ತೊಲಗಿಸಲು ಆಗೋಣ ಸಿದ್ಧ
ಮಾಡದಿರಿ ಪಕ್ಷ-ಜಾತಿಯ ಭೇದ
ಕರ್ತವ್ಯ ಅರಿತು ದೇಶದ ಒಳಿತಿಗೆ ಆಗಿರಿ ಬದ್ಧ

ಒಳಿತು ಮಾಡದಾಗದ್ದಿದರು ಬಯಸಬೇಡಿ ಕೆಡಕು
ದುರ್ಬಳಕೆಗಲ್ಲ ನಮಗಿರುವುದು ಈ ಬದುಕು
ನಮ್ಮ ಮಧ್ಯೆ ಯಾಕೆ ನೂರೊಂದು ಬಿರುಕು
ದೇವರು ಅರಿಯನು ಇದು ಯಾವ ಸೋಂಕು!

ಚರಿತ್ರೆಯ ಪುಟದಲ್ಲಿವೆ ಸಾವಿರಾರು ತ್ಯಾಗ-ಬಲಿದಾನ
ಉಳಿಸಲು ಈ ಪುಣ್ಯ ಭೂಮಿಯ ಮಾನ
ಉರಳಿದರು ವರ್ಷಗಳು ಮರಳುತ್ತಲೆ ಇವೆ ಆ ದಿನ
ಬೇಡುತ್ತಿದೆ ಇನ್ನೆಷ್ಟು ಮಹಾತ್ಮರ ಜೀವಾನ?

ಯಾರಿಗೆ ಬೇಡ ಸಂಪತ್ತು-ಸಿರಿ
ಹಾಗಂತ ದೇಶವನ್ನು ಲೂಟುವುದಲ್ಲ ಸರಿ
ಮುಂದಿನ ಪೀಳಿಗೆಗೆ ಆಗೋಣ ಮಾದರಿ
ಅದುವೇ ಇರಲಿ ನಮ್ಮೆಲ್ಲರ ಗುರಿ

No comments:

Post a Comment