Wednesday, March 19, 2014

ಗುಬ್ಬಿಯ ಜೊತೆ ಸಂವಾದ

ಮುಂಜಾವಿನ ಚಳಿಯಲಿ ನಾ ಹೊರಟೆ ಹಳ್ಳದ ಬದಿಯಲಿ
ಕಿವಿ ತುಂಬಿತು ಹಕ್ಕಿಯ ಚಿಲಿಪಿಲಿ
ಸಂತಸವೇಕೋ ತಿಳಿಯದು  ಮನದಲಿ
ಅಡಗಿದೆ ಏನೋ  ಪ್ರಕೃತಿ ಮಡಿಲಲಿ

ಗುಬ್ಬಿಯು ಒಂದು ನೋಡಿತು ನನ್ನ
ಕೇಳಿತು ಒಬ್ಬನೇ ನಗುತಿರುವ ಕಾರಣವನ್ನ
ಹೇಳಿದೆ ನಾನು "ಸವಿಯುತ್ತಿರುವೆ ಹಳ್ಳಿಯ ಸೊಬಗನ್ನ
ಸಹಿಸಿ ಸಾಕಾಗಿ ನಗರದ ಧೂಳನ್ನ"

ಗುಬ್ಬಿಗೆ ತಿಳಿಯದಾಯಿತು ನನ್ನ ಹೇಳಿಕೆಯ
ಅರೆಘಳಿಗೆ ಯೋಚಿಸಿ ನೀಡಿತೊಂದು ಸಲಹೆಯ
"ಬಿಟ್ಟು ಬಾ ನಗರದ  ಹೊರೆಯ ಮರಳಿ ಸಿಗದು ನಿನಗೆ  ಸಮಯ"

ನಾನು: "ಅಯ್ಯೋ ಗುಬ್ಬಿನನ್ನ ಪಾಡು ನಿನಗೆ ಹೇಗೆ ತಿಳಿದೀತು!
ನಿನ್ನ ಹಾಗೆ ಎರಡು ಧಾನ್ಯ ತಿಂದರೇನು ಹೊಟ್ಟೆ ತುಂಬಿತು!"

ಗುಬ್ಬಿ: "ನಿನ್ನ ಕರ್ಮಕ್ಕೆ ನೀನೇ ಹೊಣೆ

ಹಳ್ಳಿ-ವನವೊಂದೇ ನನ್ನ ಮನೆಬಂದರೂ ಇಲ್ಲಿಗೆ ಮಾಡದಿರು ಇದರ ಕೊನೆ..."

No comments:

Post a Comment